Main Centers
International Centers
India
USA
Wisdom
FILTERS:
SORT BY:
ಈ ವಿಶ್ವದಲ್ಲಿ ನೀವೊಂದು ಧೂಳಿನ ಕಣವಷ್ಟೆ. ನೀವು ನಿಮ್ಮ ಅಸ್ತಿತ್ವದ ಈ ವಾಸ್ತವತೆಯ ಅರಿವಿನಲ್ಲಿದ್ದರೆ, ನೀವು ಸಹಜವಾಗಿಯೇ ಮೌನವಾಗುವಿರಿ.
ಜೀವನ ಎನ್ನುವುದು ನಿಮ್ಮ ಸುತ್ತ ನಡೆಯುತ್ತಿರುವ ನಾಟಕವಲ್ಲ. ಜೀವನ ಎನ್ನುವುದು ‘ನೀವು’ ಎಂಬ ಆ ಮೂಲಭೂತ ಆಯಾಮವೇ ಆಗಿದೆ.
ಮಾನವರು ಹೆಚ್ಚು ಸಶಕ್ತರಾದಂತೆ, ನಾವು ಹೆಚ್ಚು ಪ್ರಜ್ಞಾಪೂರ್ವಕರೂ, ಜವಾಬ್ದಾರಿಯುತರೂ ಆಗಬೇಕೇ ಹೊರತು ಹೆಚ್ಚು ಪ್ರವೃತ್ತಿವಶರೂ, ಪ್ರತಿಕ್ರಿಯಾತ್ಮಕರೂ ಅಲ್ಲ. ಇದೊಂದು ಮೂಲಭೂತ ಅಗತ್ಯ.
ಕರ್ಮ ಎಂದರೆ ನಿಮ್ಮ ಜೀವನವನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು. ನಿಮ್ಮ ಕರ್ಮವನ್ನು ಹೆಚ್ಚು ಪ್ರಜ್ಞಾಪೂರ್ವಕ ಪ್ರಕ್ರಿಯೆಯಾಗಿಸುವ ಮೂಲಕ, ನೀವೇ ನಿಮ್ಮ ವಿಧಿಯ ಕರ್ತೃವಾಗುತ್ತೀರಿ.
ಆತ್ಮವಿಶ್ವಾಸವು ಸ್ಪಷ್ಟತೆಗೆ ಎಂದೂ ಪರ್ಯಾಯವಾಗಲಾರದು. ಯಶಸ್ವಿಯಾಗಬೇಕಾದರೆ, ನಿಮಗೆ ಬೇಕಿರುವುದು ಸ್ಪಷ್ಟತೆ, ಆತ್ಮವಿಶ್ವಾಸವಲ್ಲ.
ಈ ಹುಣ್ಣಿಮೆಯಂದು ಗೌತಮ ಬುದ್ಧನು ಪರಿಪೂರ್ಣ ಜ್ಞಾನೋದಯವನ್ನು ಹೊಂದಿದನು, ಮತ್ತು ಒಂದು ಆಧ್ಯಾತ್ಮಿಕ ಅಲೆಯನ್ನೇ ಹುಟ್ಟುಹಾಕಿದನು. ನಿಮ್ಮ ಆಧ್ಯಾತ್ಮಿಕ ಸಾಧನೆಯನ್ನು ತೀವ್ರಗೊಳಿಸಲು ಇದು ನಿಮಗೊಂದು ಪ್ರೇರಣೆಯಾಗಲಿ.
ಯೋಗ ಎಂದರೆ ಫ್ಲೆಕ್ಸಿಬಲ್ ಅಥವಾ ನಮ್ಯರಾಗುವುದು – ಬರೀ ದೈಹಿಕವಾಗಲ್ಲ, ಬದಲಿಗೆ ಎಲ್ಲ ರೀತಿಗಳಲ್ಲೂ. ಆಗ ನೀವು ಎಲ್ಲೇ ಇದ್ದರೂ ನಿರಾಳವಾಗಿರುತ್ತೀರಿ.
ನಿಮ್ಮನ್ನು ಓರ್ವ ನಾಯಕರಾಗಿಸುವುದು, ಇತರರಲ್ಲಿ ಅತ್ಯುತ್ತಮವಾದುದನ್ನು ಹೊರತರುವ ನಿಮ್ಮ ಸಾಮರ್ಥ್ಯ.
ಅದೇ ಶಕ್ತಿಯು ಕೋಟ್ಯಾನುಗಟ್ಟಲೆ ರೂಪಗಳಲ್ಲಿ ವ್ಯಕ್ತವಾಗುತ್ತಿದೆ: ಒಂದು ಕಲ್ಲಾಗಿ, ಒಂದು ಮರವಾಗಿ, ಒಂದು ಪ್ರಾಣಿಯಾಗಿ, ಓರ್ವ ಮನುಷ್ಯನಾಗಿ, ಮತ್ತು ತನ್ನ ಅತ್ಯಂತ ಸೂಕ್ಷ್ಮ ರೂಪದಲ್ಲಿ, ‘ದೈವ’ವಾಗಿ.
ನನ್ನ ಅಮ್ಮ ನನ್ನ ಮೇಲೆ ಎಂದೂ ಏನನ್ನೂ ಹೇರಲಿಲ್ಲ, ಮತ್ತು ನನಗೆ ಸಂಪೂರ್ಣವಾಗಿ ಒಳಗೂಡಿಸಿಕೊಳ್ಳುವಂತಹ ಒಂದು ಪರಿಸರವನ್ನು ನೀಡಿದಳು. ಇದು ನನಗೆ ಅದ್ಭುತವನ್ನೇ ಮಾಡಿದೆ.
ಲೆಕ್ಕಾಚಾರವು ಮನಸ್ಸಿಗೆ ಒತ್ತಡ ಮತ್ತು ಹೆಣಗಾಟವನ್ನು ತರುತ್ತದೆ. ನೀಡುವುದು ಸಂತೋಷವನ್ನು ತರುತ್ತದೆ.
ಮೊಳಕೆಯೊಡೆಯದ ಬೀಜವು ಕಲ್ಲಿಗೆ ಸಮಾನ. ನಿಮ್ಮಲ್ಲಿರುವ ದೈವಿಕ ಬೀಜವು ಅಂಕುರಿಸಬೇಕಾದರೆ, ನಿಮ್ಮ ಮನಸ್ಸು-ಹೃದಯಗಳು ತೆರೆದುಕೊಳ್ಳಬೇಕು.