Main Centers
International Centers
India
USA
Wisdom
FILTERS:
SORT BY:
ಲೆಕ್ಕಾಚಾರವು ಮನಸ್ಸಿಗೆ ಒತ್ತಡ ಮತ್ತು ಹೆಣಗಾಟವನ್ನು ತರುತ್ತದೆ. ನೀಡುವುದು ಸಂತೋಷವನ್ನು ತರುತ್ತದೆ.
ಮೊಳಕೆಯೊಡೆಯದ ಬೀಜವು ಕಲ್ಲಿಗೆ ಸಮಾನ. ನಿಮ್ಮಲ್ಲಿರುವ ದೈವಿಕ ಬೀಜವು ಅಂಕುರಿಸಬೇಕಾದರೆ, ನಿಮ್ಮ ಮನಸ್ಸು-ಹೃದಯಗಳು ತೆರೆದುಕೊಳ್ಳಬೇಕು.
ಅಧ್ಯಾತ್ಮವೆಂದರೆ ನೀರಸರಾಗುವುದಲ್ಲ. ಜೀವಕಳೆ ಮತ್ತು ಸಂತೋಷದಿಂದ ತುಂಬಿರುವ ವ್ಯಕ್ತಿಯು ಮಾತ್ರವೇ ನಿಜವಾಗಿಯೂ ಮುಕ್ತನಾಗಬಲ್ಲ.
ಒತ್ತಡ ಉಂಟಾಗುವುದು ನಿರ್ದಿಷ್ಟ ಸನ್ನಿವೇಶದಿಂದಾಗಲ್ಲ. ಒತ್ತಡ ಉಂಟಾಗುವುದು ನಿಮ್ಮದೇ ಜೀವವ್ಯವಸ್ಥೆಯನ್ನು ನಿಭಾಯಿಸಲು ನೀವು ಅಸಮರ್ಥರಾಗಿರುವುದರಿಂದ.
ಕರ್ಮ ಎಂದರೆ ನಿಮ್ಮ ಜೀವನವನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು. ನಿಮ್ಮ ಕರ್ಮವನ್ನು ಹೆಚ್ಚು ಪ್ರಜ್ಞಾಪೂರ್ವಕ ಪ್ರಕ್ರಿಯೆಯಾಗಿಸುವ ಮೂಲಕ, ನೀವೇ ನಿಮ್ಮ ವಿಧಿಯ ಕರ್ತೃವಾಗುತ್ತೀರಿ.
ಯಾರು ನಗಲಾರರೋ, ಅವರು ಧ್ಯಾನಸ್ಥರಾಗಲಾರರು. ನಗುವು ನಿಮ್ಮ ಜೀವಶಕ್ತಿಯಲ್ಲಿನ ಒಂದು ಮಟ್ಟದ ಉಲ್ಲಾಸ. ಧ್ಯಾನವು ಯಾವುದೇ ದೈಹಿಕ ಕ್ರಿಯೆಯಿಲ್ಲದೆಯೇ ನಿಮ್ಮ ಜೀವಶಕ್ತಿಯಲ್ಲಿ ಉಂಟಾಗುವ ಪರಮ ಉಲ್ಲಾಸ.
ನಿಮಗೆ ಯಶಸ್ಸನ್ನು ಸವಿಯಬೇಕಿದ್ದರೆ, ಬಾಹ್ಯ ಸನ್ನಿವೇಶಗಳನ್ನು ಸಮರಸವಾಗಿಸುವ ಮುನ್ನ, ಮೊಟ್ಟಮೊದಲು ನಿಮ್ಮನ್ನು ನೀವು ಸಮರಸವಾಗಿಸಿಕೊಳ್ಳಬೇಕು.
ನಮ್ಮೆಲ್ಲರಿಗೂ ಆನಂದದಿಂದ ಬದುಕುವ ಮತ್ತು ಅಂತರಂಗದ ಒಳಿತನ್ನು ಹೊಂದುವ ಸಾಮರ್ಥ್ಯವಿದೆ – ಅದಕ್ಕೆ ನಾವು ನಮ್ಮೊಳಗೆ ಸರಿಯಾದ ಪರಿಸರವನ್ನು ನಿರ್ಮಿಸಿಕೊಳ್ಳಬೇಕಷ್ಟೆ.
ನಿಮ್ಮನ್ನು ಓರ್ವ ನಾಯಕರಾಗಿಸುವುದು, ಇತರರಲ್ಲಿ ಅತ್ಯುತ್ತಮವಾದುದನ್ನು ಹೊರತರುವ ನಿಮ್ಮ ಸಾಮರ್ಥ್ಯ.
ಯುವಕರಾಗಿರುವುದು ಎಂದರೆ ಕಲಿಯಲು, ಬೆಳೆಯಲು, ಮತ್ತು ಜೀವನಕ್ಕೆ ಮುಕ್ತರಾಗಿರಲು ಹೃತ್ಪೂರ್ವಕರಾಗಿರುವುದು.
ಅದು ಸಂತೋಷವಾಗಿರಲಿ ಸಂಕಟವಾಗಿರಲಿ, ನೋವಾಗಿರಲಿ ನಲಿವಾಗಿರಲಿ, ಬೇಗುದಿಯಾಗಿರಲಿ ಭಾವೋತ್ಕರ್ಷವಾಗಿರಲಿ, ಎಲ್ಲವೂ ಮೂಲತಃ ಉಂಟಾಗುವುದು ನಿಮ್ಮೊಳಗಿನಿಂದಲೇ.
ಭೌತಿಕ ಪ್ರಪಂಚದಲ್ಲಿ ಘಟಿಸುವ ಪ್ರತಿಯೊಂದು ವಿಷಯವೂ ಮೂಲತಃ ಒಂದು ರೀತಿಯ ಅಲೆ. ನೀವು ನಿಪುಣ ನಾವಿಕರಾಗಿದ್ದರೆ, ಪ್ರತಿಯೊಂದು ಅಲೆಯೂ ಒಂದು ಸಾಧ್ಯತೆ.