Main Centers
International Centers
India
USA
Wisdom
FILTERS:
SORT BY:
ನಿಮ್ಮ ಜೀವವ್ಯವಸ್ಥೆಯಲ್ಲಿರುವ ಪ್ರತಿಯೊಂದು ಪರಮಾಣುವೂ ಸಮಸ್ತ ಬ್ರಹ್ಮಾಂಡದೊಂದಿಗೆ ನಿರಂತರವಾಗಿ ಸಂವಹಿಸುತ್ತಿದೆ. ಆದರೆ ನೀವು ಮಾತ್ರ ನೀವೊಂದು ಪ್ರತ್ಯೇಕ ಅಸ್ತಿತ್ವ ಎಂದುಕೊಂಡಿದ್ದೀರಿ.
ನೀವು ಎಷ್ಟು ಕೂಡಿಟ್ಟಿದ್ದೀರಿ ಎಂಬುದಕ್ಕಿಂತ ನಿಮ್ಮ ಜೀವನದ ಅನುಭವವು ಎಷ್ಟು ತೀವ್ರವಾಗಿದೆ ಎಂಬುದು ಹೆಚ್ಚು ಮುಖ್ಯವಾದುದು.
ಧ್ಯಾನಲಿಂಗ ಎಂದರೆ ಪರಿಪೂರ್ಣ ಪ್ರಾಣಮಯ ಶರೀರವನ್ನು ಹೊಂದಿರುವ ಒಂದು ಪರಮ ಚೇತನ. ಸ್ವಯಂ ಶಿವನೇ ಇಲ್ಲಿ ಕೂತಿದ್ದಾನೆ.
ಬೇರೆಯವರು ನಿಮ್ಮ ನಿರೀಕ್ಷೆಗೆ ಅನುಗುಣವಾಗಿ ವರ್ತಿಸುವುದೇ ನಿಮ್ಮ ಪ್ರಕಾರ ವಿಶ್ವಾಸ ಎಂದಾದರೆ, ಅದು ವಿಶ್ವಾಸವಲ್ಲ, ಅದು ಕಪಟ.
ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಬೇಕು, ನೀವು ನಿಮ್ಮ ಮನಸ್ಸಿನ ಹಿಡಿತದಲ್ಲಿರುವುದಲ್ಲ.
ನೀವು ‘ಈ ಕ್ಷಣ’ ಎಲ್ಲಿದ್ದೀರಿ ಎಂಬ ಬಗ್ಗೆ ನಿಮ್ಮಲ್ಲಿ ನಿಚ್ಚಳ ಸ್ಪಷ್ಟತೆ ಮೂಡಿದರೆ, ಮುಂದಿನ ಹಂತದ ಅನುಭವವು ನಿಮ್ಮೊಳಗೆ ತಾನಾಗೇ ತೆರೆದುಕೊಳ್ಳುತ್ತದೆ.
ಯಾವುದು ಅತ್ಯಂತ ಹೆಚ್ಚು ಮಹತ್ವಪೂರ್ಣವಾದುದೋ, ಅದು ನಿಮ್ಮೊಳಗೇ ಇದೆ.
ನಮ್ಮಲ್ಲಿ ಅದೇನೇ ಸಾಮರ್ಥ್ಯಗಳು, ಕೌಶಲಗಳು, ಮತ್ತು ಪ್ರತಿಭೆಗಳಿರಲಿ – ಅವೆಲ್ಲವೂ ಸಾರ್ಥಕವಾಗುವುದು ನಮ್ಮಲ್ಲಿ ಸಂತುಲನೆ ಇದ್ದಾಗ ಮಾತ್ರ.
ಇದುವೇ ಜೀವನದ ವಿರೋಧಾಭಾಸ: ನೀವು ಮಿತಿಯಿಲ್ಲದಷ್ಟು ಸುಳ್ಳುಗಳನ್ನು ಹುಟ್ಟುಹಾಕಬಹುದು, ಆದರೆ ಇರುವುದು ಒಂದೇ ಸತ್ಯ.
ಜನರು ಯಶಸ್ವಿಯಾದಾಗ ಅವರು ಬಹಳ ಕಷ್ಟಪಟ್ಟು ಕೆಲಸ ಮಾಡಿರಬೇಕು ಎಂದೇನಿಲ್ಲ. ಅವರು ಆ ಕೆಲಸವನ್ನು ಸರಿಯಾದ ವಿಧಾನದಲ್ಲಿ ಮಾಡಿರುತ್ತಾರೆ ಅಷ್ಟೆ.